ಕನ್ನಡ ನಾಡಿ ಜ್ಯೋತಿಷ್ಯ
“ಓಂ ಶ್ರೀ ಗಣೇಶಾಯ ನಮಃ | ಓಂ ನಮೋ ನಾರಾಯಣಾಯ ಓಂ ಶ್ರೀ ಗುರುದತ್ತ ಓಂ ಶ್ರೀ ಜಯ ಗುರುದತ್ತ”
ಡಾ. ಕೆ. ಸೆಲ್ವ ಮುತ್ತು ಕುಮಾರನ್ PhD., DHA
ಅಧಿಕೃತ ನಾಡಿ ಜ್ಯೋತಿಷಿಗಳು,
ಶ್ರೀ ಅತ್ರಿ ಮಹರ್ಷಿ ನಾಡಿ ಜ್ಯೋತಿಷ್ಯ ಕೇಂದ್ರ, ಜಯಂ ಆಯಿಲ್ ಮಿಲ್ ನ ಬಳಿ,
#12/14, ಎ, ತಿರುವದುಧುರೈ ಮಡಥು ಬೀದಿ, ವೈತೀಶ್ವರನ್ ಮಂದಿರ, ಸಿರಕಾಲಿ (ತಾ),
ಮೈಲಾಡುತುರೈ (ಜಿಲ್ಲೆ), ತಮಿಳು ನಾಡು – 609 117, ಭಾರತ.
ಮೊ:+91 9443986041, 7708812431 | ದೂರವಾಣಿ: +91 – 4364 – 276188
ಇ ಮೇಲ್ : [email protected] | [email protected]
www.nadiastrologyonline.com | www.jeevanadi.com
ನಾಡಿ ಜ್ಯೋತಿಷ್ಯ ಎಂಬುದು ಭಾರತದ ತಮಿಳು ನಾಡಿನ ವೈತೀಶ್ವರನ್ ಮಂದಿರದಲ್ಲಿ ಜಾರಿಯಲ್ಲಿರುವ, ಹಿಂದೂ ಜ್ಯೋತಿಷ್ಯ ಶಾಸ್ತ್ರದಿಂದ ದತ್ತಾಂಶಗಳನ್ನು ದಾಖಲಿಸುವ ಭಾರತದ ಒಂದು ಪ್ರಾಚೀನ ವಿಧಾನ. ನಾಡಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲ ಮಾನವ ಜೀವಿಗಳ ಭೂತ, ವರ್ತಮಾನ, ಭವಿಷ್ಯವನ್ನು ಹಿಂದೂ ಮಹರ್ಷಿಗಳು ನುಡಿಯುತ್ತಾರೆ ಹಾಗೂ ಇವನ್ನು ಪ್ರಾಚೀನ ಕಾಲದಲ್ಲಿಯೇ ತಾಳೆ ಗರಿಯಲ್ಲಿ ಬರೆಯಲ್ಪಟ್ಟಿದೆ ಎಂದು ನಂಬಲಾಗಿದೆ. ಬಹಳ ಜನರ ಗುಣ ಸ್ವಭಾವಗಳು, ಕುಟುಂಬದ ಹಿನ್ನೆಲೆ ಮತ್ತು ವೃತ್ತಿ ಜೀವನಗಳನ್ನು ನಾಡಿ ಜ್ಯೋತಿಷ್ಯದಿಂದಲೇ ಅಂದಾಜಿಸಲಾಗುತ್ತದೆ ಮತ್ತು ರಕ್ಷಿಸಲಾಗುತ್ತದೆ. ವಿಧಿಯ ಪ್ರಕಾರ ಅನ್ವೇಷಕರು ತಾವಾಗಿಯೇ ಈ ಎಲೆಗಳನ್ನು ಹುಡುಕಿಕೊಂಡು ಬರುತ್ತಾರೆ.
ಸಪ್ತ ಋಷಿಗಳಾದ ಅಗಸ್ತ್ಯ, ಕೌಶಿಕ, ಅತ್ರಿ, ವೇದವ್ಯಾಸ, ಭೃಗು, ವಶಿಷ್ಟ ಮತ್ತು ವಾಲ್ಮೀಕಿ ಮಹರ್ಷಿಗಳು ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಎಲ್ಲರ ಜೀವನದ ಮುನ್ಸೂಚನೆಗಳನ್ನು ತಾಳೆ ಗರಿಯ ಮೇಲೆ ಬರೆದಿರುವರು ಎಂದು ನಾಡಿ ಜ್ಯೋತಿಷ್ಯದಲ್ಲಿ ನಂಬಲಾಗಿದೆ. [ ಈ ಮಹರ್ಷಿಗಳ ಶಿಷ್ಯರನ್ನು ತ್ರಿಕಾಲ ಜ್ಞಾನಿಗಳೆಂದು (ಕಾಲಚಕ್ರದ ಮೂರು ಕಾಲಗಳನ್ನು ಅರಿತವರು) ಕರೆಯುವರು.] ಪ್ರತಿಯೊಬ್ಬ ಋಷಿಗಳೂ ಒಂದು ನಾಡಿ ಗ್ರಂಥವನ್ನು ಹೊಂದಿದ್ದು, ಅದರ ಮುಖಾಂತರ ಜ್ಞಾನವನ್ನು ಪಸರಿಸಲಾಗುತ್ತಿದೆ. ಈ ನಾಡಿ ಗ್ರಂಥಗಳು ಅತ್ರಿ ನಾಡಿ, ಶಿವ ನಾಡಿ, ಅಗಸ್ತ್ಯ ನಾಡಿ, ವಶಿಷ್ಟ ನಾಡಿ, ಭೃಗು ನಾಡಿ, ವಿಶ್ವಾಮಿತ್ರ ನಾಡಿ ( ಕೌಶಿಕ ನಾಡಿ), ನಾಡಿ ಜ್ಯೋತಿಷ್ಯ ಮುಂತಾದವುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಕೆಲವು ನಾಡಿಗಳು ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಪರಿಣಾಮವಾಗಿ ಮತ್ತು ಎಲೆಗಳ ನಾಶದಿಂದಾಗಿ ಪೂರ್ಣವಾಗಿಲ್ಲ.
ನಾಡಿ ಜ್ಯೋತಿಷ್ಯ ಅಥವಾ ನಾಡಿ ಶಾಸ್ತ್ರದಲ್ಲಿ ತಾಳೆ ಗರಿಯ ಬಳಕೆ
ಮೊದಲಿಗೆ, ಈ ಎಲೆ (ಗರಿ)ಗಳನ್ನು ಚೋಳರ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ತಮಿಳು ನಾಡಿನ ತಂಜಾವೂರಿನ ಸರಸ್ವತಿ ಮಹಲಿನಲ್ಲಿ ಸಂಗ್ರಹಿಸಿಡಲಾಗಿತ್ತು ಮತ್ತು ಕೆಲವು ಬ್ರಿಟಿಷರ ಆಳ್ವಿಕೆಯಲ್ಲಿ ನಾಶವಾದವು. ಆದರೆ ಕೆಲವು ಎಲೆಗಳು ವೈತೀಶ್ವರನ್ ಮಂದಿರದಲ್ಲಿ ಜ್ಯೋತಿಷಿಗಳಿಂದ ರಕ್ಷಿಸಲ್ಪಟ್ಟಿವೆ. ಕೆಲವು ಎಲೆಗಳು ಕಳೆದು ಹೋದುದರ ಅಥವಾ ನಾಶವಾದುದರ ಪರಿಣಾಮವಾಗಿ ಪೂರ್ಣವಾಗಿಲ್ಲ. ಪ್ರತಿಯೊಬ್ಬ ಋಷಿಯು ಒಂದು ನಾಡಿ ಗ್ರಂಥವನ್ನು ಹೊಂದಿದ್ದು, ಅದರ ಮುಖಾಂತರ ಜ್ಞಾನವನ್ನು ಪಸರಿಸಲಾಗುತ್ತಿದೆ.
ವೈತೀಶ್ವರನ್ ಮಂದಿರ
ನಾಡಿ ಶಾಸ್ತ್ರದ ಪ್ರಾಥಮಿಕ ಕೇಂದ್ರವು ದಕ್ಷಿಣ ಭಾರತದ ಒಂದು ರಾಜ್ಯವಾದ ತಮಿಳು ನಾಡಿನ ಚಿದಂಬರಂ ಬಳಿಯ ವೈತೀಶ್ವರನ್ ಮಂದಿರದಲ್ಲಿದೆ. ಇದು ಕಾವೇರಿ ನದಿಯ ಉತ್ತರದ ದಂಡೆಯ ಮೇಲಿದೆ. ವೈತೀಶ್ವರನ್ ಮಂದಿರವು ಚಿದಂಬರಂನಿಂದ 25 ಕಿ. ಮೀ ದೂರದಲ್ಲಿದ್ದು, ಈ ಸ್ಥಳವು ಶಿವ ಮಂದಿರಕ್ಕೆ ಹೆಸರುವಾಸಿಯಾಗಿದೆ ಹಾಗು ಎಲ್ಲ ರೋಗಗಳನ್ನು ಗುಣಪಡಿಸುವ ವೈದ್ಯ ನಾಥೇಶ್ವರ, ಮತ್ತು ಅವನ ಸಂಗಾತಿ ಥೈಯಲ ನಾಯಕಿಯರಿಗೆ ಅರ್ಪಿತವಾಗಿದೆ. ಇಲ್ಲಿ ಭಗವಂತನಾದ ಶಿವನು ವೈದ್ಯನ ಪಾತ್ರ ವಹಿಸಿ ತನ್ನ ಭಕ್ತರ ಎಲ್ಲ ಸಂಕಟಗಳನ್ನು ನಿವಾರಿಸುವನು ಎಂದು ಹೇಳಲಾಗುತ್ತದೆ. ಈ ಮಂದಿರದ ಕಲ್ಯಾಣಿಯಾದ ಸಿದ್ಧಮಿತ್ರದಲ್ಲಿನ ಪವಿತ್ರ ಸ್ನಾನವು ಎಲ್ಲ ರೋಗಗಳನ್ನು ನಿವಾರಿಸುತ್ತದೆ ಎಂದು ನಂಬಲಾಗುತ್ತದೆ.
ಪ್ರಾಚೀನ ಇತಿಹಾಸದಲ್ಲಿ ದೇವನಾದ ಸುಬ್ರಹ್ಮಣ್ಯ ಮತ್ತು ರಾಕ್ಷಸನಾದ ಸುರಪದ್ಮನ್ ರ ನಡುವೆ ಯುದ್ಧ ನಡೆದು, ಸುಬ್ರಹ್ಮಣ್ಯನ ಸೈನಿಕರು ತೀವ್ರವಾಗಿ ಗಾಯಗೊಂಡಾಗ ಶಿವನು ವೈತೀಶ್ವರನ್ ಆಗಿ ಬದಲಾಗಿ ಅವರ ಗಾಯಗಳನ್ನೆಲ್ಲ ವಾಸಿ ಮಾಡಿದನೆಂದು ನಂಬುತ್ತಾರೆ. ಈ ಮಂದಿರದಲ್ಲಿ ಯಾರು ಶಿವನನ್ನು ವೈತೀಶ್ವರನ್ ಎಂದು ಪೂಜಿಸುತ್ತಾರೋ ಅವರನ್ನು ದೇವನು ಎಲ್ಲ ರೀತಿಯ ಅನಾರೋಗ್ಯ ಹಾಗು ಖಾಯಿಲೆಗಳಿಂದ ದೂರವಿಡುತ್ತಾನೆ.
ತಮಿಳು ನಾಡಿನ ವೈತೀಶ್ವರನ್ ಮಂದಿರವು ನವಗ್ರಹಗಳಲ್ಲಿ ಒಂದಾದ ಮಂಗಳ ಗ್ರಹಕ್ಕೆ ಸಂಬಂಧಿಸಿದ ಮಂದಿರವಾಗಿದೆ. ಪೌರಾಣಿಕ ಕತೆಗಳ ಪ್ರಕಾರ ಮಂಗಳ ಗ್ರಹಕ್ಕೆ ಕುಷ್ಟ ರೋಗ ಬಂದಾಗ ಇಲ್ಲಿನ ವೈದ್ಯನಾಥ ಸ್ವಾಮಿಯಿಂದ (ಶಿವನಿಂದ) ಗುಣವಾಯಿತಂತೆ.
ಜಾತಕದಲ್ಲಿ ಅಂಗಾರಕ, ಕುಜ ಅಥವಾ ಮಂಗಳನು ಅನಾನುಕೂಲ ಸ್ಥಾನದಲ್ಲಿದ್ದಾಗ ಅದು ದುಷ್ಪರಿಣಾಮವನ್ನು ಉಂಟು ಮಾಡಿ, ಅದು ಆಕ್ರಮಣಶೀಲತೆ, ಅನವಶ್ಯಕ ವಿವಾದಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಥವಾ ಮತ್ಸರವನ್ನು ಉಂಟು ಮಾಡುವಂತೆ ಅಭಿವ್ಯಕ್ತವಾಗುತ್ತದೆ. ಅದು ಆರ್ಥಿಕ ನಷ್ಟ, ಕೌಟುಂಬಿಕ ಜೀವನದಲ್ಲಿ ತೊಂದರೆ ಮತ್ತು ಆಗಿಂದಾಗ್ಗೆ ಜಗಳ, ತಡವಾದ ಮದುವೆ, ಆಗಾಗ್ಗೆ ಅಪಘಾತಗಳು, ಸಣ್ಣ ಗಾಯಗಳು, ಭಾವನೆಗಳ ಏರಿಳಿತ, ಸಂಗಾತಿಯೊಂದಿಗೆ ನಿಂದನೀಯ ಹಿಂಸಾತ್ಮಕ ಕಲಹ, ಮುಂತಾದವಕ್ಕೆ ಕಾರಣವಾಗುತ್ತದೆ.
ಮಂಗಳ (ಅಂಗಾರಕ) ಗ್ರಹಕ್ಕೆ ಪರಿಹಾರ (ಉಪಾಯ) ಪೂಜೆ ಮಾಡುವ ಮೂಲಕ ನಾಡಿ ಜ್ಯೋತಿಷ್ಯ ಪರಿಹಾರಗಳಿಂದ ಮಾಂಗಲಿಕ ದೋಷ, ಕುಜ ದೋಷವನ್ನು ಸರಿಪಡಿಸಲಾಗುತ್ತದೆ. ವೈತೀಶ್ವರನ್ ಮಂದಿರದಲ್ಲಿ ಮಂಗಳನನ್ನು ಪೂಜಿಸುವುದು ಮತ್ತು ಅಂಗಾರಕ ಪೂಜೆ ಮಾಡುವುದು ಕುಜ ದೋಷಕ್ಕೆ ಉತ್ತಮ ಪರಿಹಾರವಾಗಿದ್ದು, ಅಂಗಾರಕನ ಎಲ್ಲ ಋಣಾತ್ಮಕ ಪರಿಣಾಮಗಳನ್ನು ತಟಸ್ಥಗೊಳಿಸುತ್ತದೆ. ಭಕ್ತರು ಕೆಂಪು ವಸ್ತ್ರ ಮತ್ತು ತೊಗರಿ ಬೇಳೆಯನ್ನು ಇಲ್ಲಿ ಅರ್ಪಿಸುತ್ತಾರೆ. ಮಂಗಳವಾರದಂದು ಅಂಗಾರಕನನ್ನು ಪೂಜಿಸಲು ವಿಶೇಷ ದಿನ ಎಂದು ಪರಿಗಣಿಸಲಾಗುತ್ತದೆ. ಇದು ಹಳೆಯ ಮತ್ತು ಶಕ್ತಿಯುತ ಮಂದಿರವಾಗಿದ್ದು, ಬಹಳ ಕಂಪನಗಳನ್ನು (ತರಂಗ / ಅಲೆಗಳನ್ನು) ಹೊಂದಿರುವ ಮಂದಿರವಾಗಿದೆ. ಈ ದೇವಸ್ಥಾನವು ಯಾತ್ರಿಕರಿಂದ ತುಂಬಿರುತ್ತದೆ. ಮಂದಿರವು ರಾತ್ರಿ 9. 00 ಗಂಟೆವರೆಗೂ ತೆರೆದಿರುತ್ತದೆ. ಶಿವನು (ವೈತೀಶ್ವರನು) ತನ್ನ ಭಕ್ತರಿಗೆ ಆರೋಗ್ಯವನ್ನು ಮತ್ತು ಅವನ ಮಗನಾದ ಸೆಲ್ವ ಮುತ್ತು ಕುಮಾರನು ( ಮುರುಗನ್ / ಕಾರ್ತಿಕೆಯನು) ಸಂಪತ್ತನ್ನು ನೀಡುವರು. ಒಂದೇ ದೇವಾಲಯದಲ್ಲಿ ಆರೋಗ್ಯ ಮತ್ತು ಐಶ್ವರ್ಯವನ್ನು ಪಡೆಯಬಹುದಾಗಿದೆ, ಪ್ರತಿಯೊಬ್ಬರೂ ಭೇಟಿ ನೀಡಲೇ ಬೇಕಾದ ಸ್ಥಳವಿದು.
ಈ ಊರನ್ನು ಪ್ರಸಿದ್ಧ ನಾಡಿ ಜ್ಯೋತಿಷ್ಯದ ಜನ್ಮ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಜನರು ಈ ಮಂದಿರವನ್ನು ವೈತೀಶ್ವರನ್ ಮಂದಿರ ನಾಡಿ ಜ್ಯೋತಿಷ್ಯ ಎಂದೂ ಕರೆಯುತ್ತಾರೆ.
ನಾವು ನಾಡಿ ಜ್ಯೋತಿಷ್ಯ ಕ್ಷೇತ್ರದಲ್ಲಿ ಸಫಲವಾಗಿ ಸೇವೆ ಸಲ್ಲಿಸುತ್ತಿರುವ ಜ್ಯೋತಿಷಿಗಳ ಕುಟುಂಬಗಳಲ್ಲಿ ಒಬ್ಬರಾಗಿದ್ದು, ವೈತೀಶ್ವರನ್ ಮಂದಿರದಲ್ಲಿ ಉತ್ತಮ ಮತ್ತು ಖ್ಯಾತ ನಾಡಿ ತಜ್ಞ ಎಂದು ಹೆಸರುವಾಸಿಯಾಗಿದ್ದೇವೆ. ಅಧಿಕೃತ ನಾಡಿ ಜ್ಯೋತಿಷಿಗಳು, ಡಾ. ಕೆ. ಸೆಲ್ವ ಮುತ್ತು ಕುಮಾರನ್ PhD., DHA, ಶ್ರೀ ಅತ್ರಿ ನಾಡಿ, ಅಗಸ್ತ್ಯ ನಾಡಿ, ಶಿವ ನಾಡಿ ಜ್ಯೋತಿಷ್ಯ ಕೇಂದ್ರ, ವೈತೀಶ್ವರನ್ ಮಂದಿರ. ನಾಡಿ ಜ್ಯೋತಿಷ್ಯ ಸೇವೆ ಪಡೆಯಲು, ಇಂಗ್ಲೀಷ್, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯನ್ನು ಒಳಗೊಂಡಂತೆ 6 ವಿವಿಧ ಭಾಷೆಗಳಲ್ಲಿ ಭವಿಷ್ಯ ತಿಳಿಯಲು ನಮ್ಮನ್ನು ಸಂಪರ್ಕಿಸಿ.
ಈಗ ನಾಡಿ ಜ್ಯೋತಿಷ್ಯ ವೃತ್ತಿಯಾಗಿದ್ದು, ಭವಿಷ್ಯ ನುಡಿಯಲು ತಮ್ಮ ಪೂರ್ವಜರಿಂದ ತರಬೇತಿ ಪಡೆಯಲಾಗುತ್ತಿದೆ. ನಾಡಿ ಜ್ಯೋತಿಷಿಗಳು ಮೇಲೆ ತಿಳಿಸಿದ ಯಾವುದಾದರೂ ಒಬ್ಬ ಮಹರ್ಷಿಗಳ ಬರವಣಿಗೆಗಳನ್ನು ಅನುಸರಿಸುತ್ತಾರೆ. ಪ್ರಸ್ತುತ ಅತ್ರಿ ನಾಡಿ, ಅಗಸ್ತ್ಯ ನಾಡಿ, ಶಿವ ನಾಡಿ, ವಶಿಷ್ಟ ನಾಡಿಗಳು ಪ್ರಸಿದ್ಧವಾಗಿವೆ. ಪ್ರಾಚೀನ ತಮಿಳು ಲಿಪಿಯಾದ ವಟ್ಟೆಜುತು ಎಂಬ ಲಿಪಿಯನ್ನು ತಾಳೆ ಗರಿಯ ಮೇಲೆ ಬರೆಯಲು ಬಳಸಲಾಗಿದೆ.
ನಾಡಿ ಜ್ಯೋತಿಷ್ಯದ ವಿಧಾನ
ನಾಡಿ ಜ್ಯೋತಿಷ್ಯದಲ್ಲಿ ಜ್ಯೋತಿಷಿಗಳು ವ್ಯಕ್ತಿಯ ಹೆಬ್ಬೆರಳಿನ ( ಗಂಡಸರ ಬಲಗೈ ಹೆಬ್ಬೆರಳು ಮತ್ತು ಹೆಂಗಸರಿಗೆ ಎಡಗೈ ಹೆಬ್ಬೆರಳು) ಗುರುತನ್ನು ಪಡೆಯುತ್ತಾರೆ. ಹೆಬ್ಬೆರಳಿನ ರೇಖೆಗಳು 108 ವಿಧದಲ್ಲಿರುವುದರಿಂದ, ಜ್ಯೋತಿಷಿಯು ವ್ಯಕ್ತಿಯ ಹೆಬ್ಬೆರಳಿನ ಗುರುತನ್ನು ತನ್ನ ಸಂಗ್ರಹದ ಎಲೆಗಳಲ್ಲಿ ಹುಡುಕುತ್ತಾರೆ. ನಿರ್ದಿಷ್ಟ ವ್ಯಕ್ತಿಯ ಹೆಬ್ಬೆರಳಿನ ಗುರುತು ಎಲೆಗಳಲ್ಲಿ ಇದ್ದರೂ ಕೂಡ ಅದನ್ನು ಹುಡುಕುವುದು ಬಹಳ ಸಮಯ ತೆಗೆದುಕೊಳ್ಳುವ ಮತ್ತು ಕಷ್ಟವಾದ ವಿಧಾನ. ಆ ಎಲೆಯನ್ನು ಹುಡುಕಿದ ನಂತರ ಜ್ಯೋತಿಷಿಯು ಅದರಲ್ಲಿರುವ ಪ್ರಥಮ ವಾಕ್ಯವನ್ನು ಓದುತ್ತಾರೆ ಮತ್ತು ಅದು ಸರಿಯಾಗಿದ್ದಲ್ಲಿ ಅದರ ಅಧಿಕೃತತೆಯನ್ನು ಧೃಡ ಪಡಿಸಿಕೊಳ್ಳಲು ಎರಡನೆಯ ವಾಕ್ಯವನ್ನು ಓದುತ್ತಾರೆ ಅದು ತಪ್ಪಾಗಿದ್ದಲ್ಲಿ, ಜ್ಯೋತಿಷಿಯು ಮೊದಲ ಎಲೆಯನ್ನು ಬಿಟ್ಟು ಮುಂದಿನ ಎಲೆಯನ್ನು ಆರಿಸಿಕೊಳ್ಳುತ್ತಾರೆ. ಈ ವಿಧಾನವು ಮುಂದುವರೆಯುತ್ತಾ ಹೋಗಿ ಜ್ಯೋತಿಷಿಯು ಎಲೆಗಳ ಕಟ್ಟಿನಿಂದ ವ್ಯಕ್ತಿಯ ವಿವರಗಳಿಗೆ ಸರಿಯಾಗಿ ಹೊಂದಾಣಿಕೆಯಾಗುವ ಎಲೆಯನ್ನು ಗುರುತಿಸುತ್ತಾರೆ. ಈ ವಿಧಾನವು ಕೆಲವು ವಾರ ಅಥವಾ ಕೆಲವೊಮ್ಮೆ ತಿಂಗಳುಗಳವರೆಗೂ ಮುಂದುವರೆಯಬಹುದು. ಅನ್ವೇಷಕರು ಸ್ವ ಇಚ್ಛೆಯಿಂದ ವಿಧಿ ನಿಯಮದಂತೆ ನಾಡಿ ಜ್ಯೋತಿಷ್ಯ ಎಂದು ಕರೆಯಲ್ಪಡುವ ಆ ಕಾಲದವರೆಗೂ ಬರುತ್ತಾರೆ.
ಈ ಎಲೆಗಳು ಕೇವಲ ಭಾರತೀಯರಿಗಾಗಿ ಮಾತ್ರವಲ್ಲದೇ, ಅನ್ಯ ದೇಶೀಯ, ಧರ್ಮ ಮತ್ತು ಪಂಗಡಗಳ ಜನರಿಗೂ ಅನ್ವಯಿಸುತ್ತದೆ. ಪ್ರಪಂಚದಾದ್ಯಂತ 60% ಜನರು ಈ ಫಲಿತಾಂಶವನ್ನು ಹೊಂದುತ್ತಾರೆ. ಇನ್ನುಳಿದ ಎಲೆಗಳು ನಾಶವಾಗಿರಬಹುದು ಅಥವಾ ಕಾಲಾನುಕ್ರಮದಲ್ಲಿ ಕಳೆದು ಹೋಗಿರಬಹುದು.
ನಿರ್ದಿಷ್ಟ ಎಲೆಯನ್ನು ಹುಡುಕಿದ ನಂತರ ಜ್ಯೋತಿಷಿಯು ಎಲೆಯ ಮೇಲೆ ಬರೆದಿರುವ ಭವಿಷ್ಯವನ್ನು ಹೇಳುತ್ತಾರೆ. ಭವಿಷ್ಯವನ್ನು ಬೇರೆಯ ಕಾಂಡ ಅಥವಾ ಅಧ್ಯಾಯದಲ್ಲಿ ಬರೆಯಲಾಗಿರುತ್ತದೆ.
ನಾಡಿ ಜ್ಯೋತಿಷ್ಯ: ನಾಡಿ ಜ್ಯೋತಿಷಿಯು ನಾಡಿ ಭವಿಷ್ಯ ಹೇಳಲು ಬಳಸುವ ನಾಡಿ ಓಲೆಯ ( ತಾಳೆ ಗರಿಯ ಹಸ್ತ ಪ್ರತಿಯ) ಮೇಲೆ ಬರೆದಿರುವ 14 ಕಾಂಡಗಳು ಅಥವಾ ಅಧ್ಯಾಯಗಳನ್ನು ಚರ್ಚಿಸೋಣ.
1) ಜಾತಕದ 12 ಮನೆಗಳ ಪ್ರಕಾರ ಭವಿಷ್ಯದ ಸಾಮಾನ್ಯ ಮುನ್ಸೂಚನೆಯು ಸಾಮಾನ್ಯ ಕಂದದಲ್ಲಿ ಇರುತ್ತದೆ.
2) ಕುಟುಂಬ, ಶಿಕ್ಷಣ, ಕಣ್ಣುಗಳು, ಹಣ, ಮಾತು
3) ಸಹೋದರರು ಮತ್ತು ಸಹೋದರಿಯರು, ಅವರೊಂದಿಗಿನ ಸಂಬಂಧಗಳು
4) ತಾಯಿ, ಭೂಮಿ, ಕೃಷಿ, ಮನೆ, ವಾಹನಗಳು, ಸಂತೋಷ ಮತ್ತು ಸಂಪತ್ತು.
5) ಮಕ್ಕಳ ಜೀವನ, ಮಕ್ಕಳು ಜನಿಸದಿರಲು ಕಾರಣಗಳನ್ನು ಕೂಡ ಅದು ವಿವರಿಸುತ್ತದೆ ಮತ್ತು ಮಕ್ಕಳ ಭವಿಷ್ಯದ ಜೀವನ ಶೈಲಿ ಮುಂತಾದವು.
6) ಖಾಯಿಲೆಗಳು, ಸಾಲಗಳು, ಶತ್ರುಗಳು, ದಾವೆಗಳು ಅಥವಾ ಕಾನೂನು ಪ್ರಕರಣಗಳಿಂದ ಉಂಟಾದ ತೊಂದರೆಗಳು ಮತ್ತು ಕಷ್ಟಗಳನ್ನು ಕೂಡ ವಿವರಿಸಿ ನಾಡಿ ಜ್ಯೋತಿಷ್ಯದ ಮೂಲಕ ಅದನ್ನು ಪರಿಹರಿಸಲಾಗುತ್ತದೆ.
7) ಇಲ್ಲಿ ನಾವು ವಿವಾಹ ಮತ್ತು ವೈವಾಹಿಕ ಜೀವನದ ಬಗ್ಗೆ ತಿಳಿಯಬಹುದು. ಇದು ಭವಿಷ್ಯದ ಸಂಗಾತಿಯ ಬಗೆಗೆ, ಅವರ ಹೆಸರು, ಜಾತಕ, ಮದುವೆಯ ವಯಸ್ಸು ಮತ್ತು ಸಂಗಾತಿಯ ಕೆಲವು ಸ್ವಭಾವಗಳ ಸುಳಿವನ್ನು ನೀಡುತ್ತದೆ.
8) ನಾವು ಜೀವಿತಾವಧಿ, ದೀರ್ಘಾಯುಷ್ಯ, ವ್ಯಕ್ತಿಯ ಜೀವನದಲ್ಲಿನ ಅಪಘಾತಗಳು ಮತ್ತು ಅಪಾಯಗಳು ಸಂಭವಿಸುವ ವಯಸ್ಸನ್ನು ತಿಳಿಯಬಹುದು.
9) ನಾವು ತಂದೆ, ಅದೃಷ್ಟ, ಸಂಪತ್ತು, ಆಧ್ಯಾತ್ಮಿಕತೆ, ಪವಿತ್ರ ಕ್ಷೇತ್ರಗಳ ಭೇಟಿ, ಗುರು ಮತ್ತು ಸಂತರ ಉಪದೇಶಗಳಿಂದ ಆಗುವ ಲಾಭ, ದತ್ತಿ ಕಾರ್ಯ ಮತ್ತು ಸಾಮಾಜಿಕ ಜೀವನವನ್ನು ತಿಳಿಯಬಹುದು.
10) ಈ ಕಾಂಡವು ವೃತ್ತಿ, ಉದ್ಯೋಗ, ಕೆಲಸ ಮತ್ತು ವ್ಯವಹಾರ, ವೃತ್ತಿಯಲ್ಲಿನ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ವಿವರಿಸುತ್ತದೆ. ಮತ್ತು ವ್ಯಕ್ತಿಯ ಕೆಲಸ ಅಥವಾ ವ್ಯಾಪಾರದಲ್ಲಿನ ಬೆಳವಣಿಗೆ, ಸಮೃದ್ಧಿ ಅಥವಾ ನಷ್ಟದ ಬಗೆಗೆ ಭವಿಷ್ಯವನ್ನು ಹೊಂದಿರುತ್ತದೆ.
11) ಈ ಕಾಂಡವು ಎರಡನೇ ಮದುವೆಯ ಅಥವಾ ಮುಂದಿನ ಮದುವೆಯ ಬಗೆಗೆ ಹಾಗು ವ್ಯಾಪಾರದಲ್ಲಿನ ಲಾಭದ ಬಗೆಗೆ ತಿಳಿಸುತ್ತದೆ.
12) ವೆಚ್ಚಗಳು, ವಿದೇಶದ ಭೇಟಿ, ಮುಂದಿನ ಜನ್ಮ ಹಾಗು ಮೋಕ್ಷ.
13) ಶಾಂತಿ ಕಾಂಡ (ಪರಿಹಾರ) – ಈ ಕಾಂಡವು ಹಿಂದಿನ ಜನ್ಮದ ಬಗೆಗೆ, ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಬಗೆಗೆ ಹಾಗು ಹಿಂದಿನ ಕೆಟ್ಟ ಕಾರ್ಯಗಳ ಪರಿಣಾಮವನ್ನು ಕಡಿಮೆ ಮಾಡಲು ಮಾಡಬೇಕಾದ ಆಚರಣೆಗಳ ಸರಣಿಯ ಕುರಿತಾಗಿದೆ.
14) ದೀಕ್ಷಾ ಕಾಂಡ – ಇದು ವ್ಯಕ್ತಿಯನ್ನು ದುಷ್ಟ ಶಕ್ತಿಗಳಾದ ಮತ್ಸರ ಮತ್ತು ದ್ವೇಷದಿಂದ ರಕ್ಷಿಸುವ ರಕ್ಷಾ ಮಂತ್ರದ ತಯಾರಿಯ ವಿಧಾನಗಳನ್ನು ತಿಳಿಸುತ್ತದೆ.
ಮೇಲೆ ತಿಳಿಸಿದ 14 ಕಾಂಡಗಳನ್ನು ಹೊರತು ಪಡಿಸಿ ನಾಡಿ ಶಾಸ್ತ್ರವು ಕೆಳಗೆ ತಿಳಿಸಿರುವ ಇನ್ನಿತರ 4 ಅಧ್ಯಾಯಗಳನ್ನು ಒಳಗೊಂಡಿದೆ.
ಔಷಧ ಕಾಂಡ – ಈ ಕಾಂಡವು ಔಷಧಿಗಳ ಮತ್ತು ದೀರ್ಘಕಾಲದ ರೋಗಗಳಿಂದ ಬಳಲುತ್ತಿರುವವರಿಗೆ ಮದ್ದುಗಳ ಕುರಿತಾಗಿದೆ.
ಜ್ಞಾನ ಕಾಂಡ (ಆಧ್ಯಾತ್ಮಿಕ ಜೀವನ) – ಈ ಅಧ್ಯಾಯವು ಆಧ್ಯಾತ್ಮಿಕತೆಯ ಬೆಳವಣಿಗೆ, ದೇವರು ಮತ್ತು ಜ್ಞಾನವನ್ನು ಸಾಧಿಸುವ ಸಾಧ್ಯತೆಗಳ ಕುರಿತಾಗಿದೆ. ನಾವು ಜ್ಞಾನವವನ್ನು ಪಡೆಯಲು ಬೋಧಿಸುವ ಗುರು ಮುಂತಾದವು.
ರಾಜಕೀಯ ಕಾಂಡ ( ಸಾರ್ವಜನಿಕ ಜೀವನ ) – ಸಾಮಾಜಿಕ ಸೇವೆ ಮತ್ತು ರಾಜಕೀಯ ಜೀವನದ ಬಗೆಗೆ ಭವಿಷ್ಯ ವಾಣಿಗಳು.
ಜೀವ ನಾಡಿ – ಇದು ಅತ್ರಿ ಜೀವ ನಾಡಿ, ಒಂದು ವಿಶೇಷ ಅಧ್ಯಾಯವಾಗಿದ್ದು, ಗ್ರಾಹಕನ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ತಾಳೆ ಗರಿಯ ಮೇಲೆ ಕ್ರಿಯಾತ್ಮಕವಾಗಿ ಮೂಡುತ್ತದೆ. ಜೀವ ನಾಡಿಗೆ ಹೆಬ್ಬೆರಳಿನ ಗುರುತಿನ ಅವಶ್ಯಕತೆ ಇರುವುದಿಲ್ಲ. ಅನ್ವೇಷಕನ ಪ್ರಶ್ನೆಯನ್ನು ಆಧರಿಸಿ ಹೇಳಬೇಕಾದ ಮಾತುಗಳು ತಕ್ಷಣವೇ ಕಾಣಿಸುತ್ತದೆ. ಈ ಓದುವಿಕೆಯು ಅನ್ವೇಷಕ ಮತ್ತು ಓದುಗ ಇಬ್ಬರೂ ಭಾಗ್ಯವಂತರಾಗಿದ್ದಾಗ ಮಾತ್ರ ಸಾಧ್ಯ. ಅನ್ವೇಷಕನು ತನ್ನ ಜೀವನದ ನಿರ್ಣಾಯಕ ವಿಷಯಗಳಿಗೆ ಮಾತ್ರ ಇದನ್ನು ಪಡೆಯುತ್ತಾನೆ.
ಅನ್ವೇಷಕನು ಭೇಟಿಯ ದಿನ ಮತ್ತು ಸಮಯವನ್ನು ನಿಗದಿಗೊಳಿಸಿಕೊಳ್ಳ ಬೇಕಾಗುತ್ತದೆ. ಪ್ರಾರ್ಥನೆಯ ನಂತರ ಅನ್ವೇಷಕನಿಗೆ ಕವಡೆಯನ್ನು ನೀಡಿ, ನಿರ್ದಿಷ್ಟ ಓಲೆಯ ಓದುವಿಕೆಯನ್ನು ಅರಿಯಲು ಕವಡೆ ಹಾಕಲು ಹೇಳಲಾಗುತ್ತದೆ. ಬಂದ ಸಂಖ್ಯೆಯನ್ನಾಧರಿಸಿ ಓದುಗರು ಓಲೆಯನ್ನು ತಲುಪಿ ಪ್ರಶ್ನೆಗೆ ಉತ್ತರವನ್ನು ಓದಲಾರಂಭಿಸುತ್ತಾರೆ. ಕೆಲವೊಮ್ಮೆ ಅನ್ವೇಷಕನಿಂದ ಮೊದಲು ಮಾಹಿತಿಯನ್ನು ಪಡೆದು ಕೆಲ ದಿನಗಳ ನಂತರ ಅಥವಾ ಸಮಯಾವಕಾಶ ಆದಾಗ ನಾಡಿಯನ್ನು ಓದಲಾಗುತ್ತದೆ. ಜೀವನಾಡಿಯು ನಡೆಯುವ ಜೀವಂತ ವಿಷಯವಾಗಿದೆ.
ಮಹರ್ಷಿ ಶ್ರೀ ಅತ್ರಿ, ಅನಸೂಯ, ದತ್ತಾತ್ರೇಯ, ಶಿರಡಿಯ ಶ್ರೀ ಸಾಯಿಬಾಬಾ
ಹಿಂದೂ ಪುರಾಣದ ಪ್ರಕಾರ ಅತ್ರಿ ಮಹರ್ಷಿಯ ಸತಿ ಮತ್ತು ದತ್ತಾತ್ರೇಯನ ತಾಯಿಯಾದ ಅನಸೂಯಳನ್ನು ದೈವಿಕ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಅವತಾರ ಎಂದು ಪರಿಗಣಿಸಲಾಗುತ್ತದೆ. ತಮಿಳು ನಾಡಿನ (ಭಾರತದ) ದತ್ತಾತ್ರೇಯ ಮಂದಿರ, ಶ್ರೀ ಸಾಯಿಬಾಬಾ ಪ್ರಾಚೀನ ಭಾರತದ ಅಗ್ರಗಣ್ಯ ಸಂತ, ಕಲಿಯುಗದಲ್ಲಿ ದತ್ತಾತ್ರೇಯನ ಐದನೇ ಅವತಾರ.
ದತ್ತಾತ್ರೇಯನ ಮಂದಿರಗಳು ಕೆಲವೇ ಕೆಲವು ಇದ್ದು ಅವುಗಳಲ್ಲಿ ತಮಿಳು ನಾಡಿನ ಕುಂಭಕೋಣಂ ಬಳಿಯ ಸೇಂಗಾಳಿ ಪುರಂ ನಲ್ಲಿರುವ ದೇವಾಲಯವು ಒಂದಾಗಿದೆ. ಈ ಮಂದಿರವು ಅತಿ ಹೆಚ್ಚಿನ ಶಕ್ತಿಯುತ ಯಂತ್ರಗಳಾದ ಕಾರ್ತ ವೀರ್ಯಾರ್ಜುನ ಯಂತ್ರ ಮತ್ತು ಶ್ರೀ ದತ್ತ ಯಂತ್ರಗಳನ್ನು ಹೊಂದಿದೆ. ದತ್ತ ಜಯಂತಿಯನ್ನು ಇಲ್ಲಿ ತಮಿಳು ಕಾರ್ತಿಕ ಮಾಸದಲ್ಲಿ (ನವೆಂಬರ್ – ಡಿಸೆಂಬರ್) ಆಚರಿಸಲಾಗುತ್ತದೆ. ದತ್ತ ಜಯಂತಿಯಂದು ಭಕ್ತರಿಗೆ “ಓಂ ಶ್ರೀ ಗುರುದತ್ತ! ಓಂ ಶ್ರೀ ಜಯ ಗುರುದತ್ತ!” ಎಂಬ ಮಂತ್ರವನ್ನು ಜಪಿಸುತ್ತಾ ಆರು ಮಾಲೆ ( ಷಟ್ ಮಾಲೆ) ಗಳನ್ನು ನಿರ್ವಹಿಸಲು ಹೇಳಲಾಗುತ್ತದೆ.
ಕಲಿಯುಗದಲ್ಲಿ ಜನರು ಮೇಲೆ ಹೇಳಿದ ಮಂತ್ರವನ್ನು ನಿರ್ಮಲ ಯೋಚನೆ, ಒಳ್ಳೆಯ ಹವ್ಯಾಸ ಮತ್ತು ಪವಿತ್ರ ಹೆಸರುಗಳ ಸತತ ಸ್ಮರಣೆಯಿಂದ ಜಪಿಸಬೇಕು. ಸಾಧ್ಯವಾದಾಗಲೆಲ್ಲ ಬಡ ಬಗ್ಗರಿಗೆ ಒಳ್ಳೆಯ ಕೆಲಸ ಮಾಡಬೇಕು. ಬಡವರಿಗೆ ಸಹಾಯ ಮಾಡುವ ಅವಕಾಶ ಸಿಗದಿದ್ದರೆ ಮಕ್ಕಳಿಗೆ ಉಡುಗೊರೆಗಳನ್ನು ನೀಡಿ, ದಿನ ನಿತ್ಯದ ಜೀವನದಲ್ಲಿ ಜನರಿಗೆ ಸಹಾಯ ಮಾಡಿ, ಕಚೇರಿಯಲ್ಲಿ ಸಹಾಯ ಮಾಡಿ ಇತ್ಯಾದಿ. ಈ ರೀತಿಯಲ್ಲಿ ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಿರಿ.
ಗಮನಿಸಿ:
ಮೇಲೆ ಹೇಳಿದ ಎಲ್ಲ ನಾಡಿ ಅಧ್ಯಾಯಗಳು ಋಷಿಗಳಿಂದ ಹೇಳಲ್ಪಟ್ಟವು. ನಾವು ತಾಳೆ ಗರಿಗಳಿಗಿಂತ ಹೆಚ್ಚಿನ ವಿವರಗಳನ್ನು ನಾವಾಗಿಯೇ ನೀಡುವುದಿಲ್ಲ. ಎಲ್ಲ ಅಧ್ಯಾಯಗಳು (ಕಾಂಡಗಳು) ಪಠಣದ ದಿನದಿಂದ ಜೀವನದ ಅಂತ್ಯದವರೆಗೂ ಭವಿಷ್ಯವನ್ನು ಹೇಳುತ್ತವೆ.
ನಾವು ಇನ್ನಾವುದೇ ಸ್ಥಳದಲ್ಲಿಯೂ ನಮ್ಮ ಶಾಖೆಗಳನ್ನು ಹೊಂದಿಲ್ಲ.
ಇ ಮೇಲ್ ಮುಖಾಂತರ ನಿಮ್ಮ ಭೇಟಿಯ ಸಮಯವನ್ನು ನಿಗದಿ ಪಡಿಸಿಕೊಳ್ಳಿ. : [email protected]
ಮೊಬೈಲ್ / ವಾಟ್ಸ್ ಆಪ್ : (7708812431).
ಸಮಾಲೋಚನೆಯ ಸಮಯ: ಬೆಳಿಗ್ಗೆ 9.00 ಗಂಟೆ ಇಂದ ರಾತ್ರಿ 9.00 ಗಂಟೆ ವರೆಗೆ.
ಅನುಭವಿ ಮತ್ತು ಪ್ರಸಿದ್ಧ ನಾಡಿ ಜ್ಯೋತಿಷಿಗಳಾಗಿ ನಮ್ಮ ಗ್ರಾಹಕರು ಫಲಾನುಭವಿಗಳಾಗಿರುವುದನ್ನು ನಾವು ಅವರ ಪ್ರತಿಕ್ರಿಯೆಗಳಿಂದ ತಿಳಿದು ಕೊಂಡಿದ್ದೇವೆ ಮತ್ತು ನಾವು ಸಂರಕ್ಷಿಸಿದ ತಾಳೆ ಗರಿಗಳಿಂದ ನುಡಿದ ಭವಿಷ್ಯವು 100 ಕ್ಕೆ ಪ್ರತಿಶತ 80 ಭಾಗ ಸರಿಯಾಗಿದೆ ಎಂಬುದನ್ನು ಅರಿತಿದ್ದೇವೆ.
ದೇವಸ್ಥಾನದ ಪೂಜೆಯನ್ನೂ ಒಳಗೊಂಡಂತೆ, ಪವಿತ್ರ ಬರಹಗಳಲ್ಲಿ ಹೇಳಿದ ಪರಿಹಾರಗಳನ್ನು ಮಾಡಿಸುವುದು ಅವರ ವೈಯಕ್ತಿಕ ಆಯ್ಕೆಗೆ ಬಿಟ್ಟಿದ್ದು.
ನಿಮ್ಮ ಪ್ರಯಾಣದ ಕಾರು ಚಾಲಕರು ಮತ್ತು ಸ್ಥಳೀಯ ಗೈಡ್ (ಮಾರ್ಗದರ್ಶಕ) ಗಳು ನಿಮ್ಮ ಹಾದಿ ತಪ್ಪಿಸುವ ಸಾಧ್ಯತೆಗಳಿರುವುದರಿಂದ ಜಾಗೃತರಾಗಿರಿ. ನಮ್ಮ ಮೊಬೈಲ್ ಸಂಖ್ಯೆಯನ್ನು (77088-12431, 94439-86041) ಮತ್ತು ಪೂರ್ಣ ವಿಳಾಸವನ್ನು ವೈತೀಶ್ವರನ್ ಮಂದಿರದಲ್ಲಿ ನೀವು ಕಾರ್ಯ ಆರಂಭಿಸುವ ಮೊದಲು ಖಾತರಿ ಪಡಿಸಿಕೊಳ್ಳಿ.
www.nadiastrologyonline.com www.jeevanadi.com
ತಮಿಳು ನಾಡಿನ ವೈತೀಶ್ವರನ್ ಮಂದಿರದ ಪ್ರಧಾನ ಕೇಂದ್ರದಿಂದ ನೇರವಾಗಿ ಆನ್ಲೈನ್ ಮೂಲಕ ನಾಡಿ ಜ್ಯೋತಿಷ್ಯ, ವಾಟ್ಸ್ ಆಪ್ / ಸ್ಕೈಪ್ ಮುಖಾಂತರ ಜೀವನಾಡಿ ಪಠಣ.
ಆನ್ಲೈನ್ ನಾಡಿ ಜ್ಯೋತಿಷ್ಯವನ್ನು ಅರಿಯುವುದು ಹೇಗೆ?
ವ್ಯಕ್ತಿಯ ಭೌತಿಕ ಅನುಪಸ್ಥಿತಿಯಲ್ಲಿ ಅವರ ನಾಡಿ ಜ್ಯೋತಿಷ್ಯ ಮತ್ತು ಜೀವನಾಡಿ ಭವಿಷ್ಯವನ್ನು ಹೇಗೆ ತಿಳಿಯುವುದು.
ಯಾರಿಗೆ ನೇರವಾಗಿ ಅತ್ರಿ ಮಹರ್ಷಿ ನಾಡಿ ಜ್ಯೋತಿಷ್ಯ ಕೇಂದ್ರಕ್ಕೆ ಬರಲು ಆಗುವುದಿಲ್ಲವೋ ಅಂಥವರಿಗಾಗಿ ವಿಶೇಷ ಸೇವೆ ಲಭ್ಯವಿದೆ. ನೀವು ಇ ಮೇಲ್ : [email protected] ಮುಖಾಂತರ ಅಥವಾ ವಾಟ್ಸ್ ಆಪ್ ಮುಖಾಂತರ ನಿಮ್ಮ ಹೆಬ್ಬೆರಳಿನ (ಗಂಡಸರ ಬಲಗೈ ಹೆಬ್ಬೆರಳು ಮತ್ತು ಹೆಂಗಸರಿಗೆ ಎಡಗೈ ಹೆಬ್ಬೆರಳು) ಗುರುತನ್ನು ಜನ್ಮ ವಿವರಗಳ ಜೊತೆಗೆ ಕಳಿಸಬೇಕಾಗುತ್ತದೆ. ನಿಮ್ಮ ಹೆಬ್ಬೆರಳಿನ ಗುರುತನ್ನು ಕಳಿಸುವಾಗ ಏನಾದರೂ ಪ್ರಶ್ನೆಗಳಿದ್ದಲ್ಲಿ ಅಥವಾ ಸಹಾಯ ಬೇಕಾದಲ್ಲಿ ನಮಗೆ ಕರೆ ಮಾಡಬಹುದು. ನೀವು ಕಳುಹಿಸಿದ ವಿವರಗಳ ಆಧಾರದ ಮೇಲೆ ನಾವು ನಿಮಗೆ ಸಂಬಂಧ ಪಟ್ಟ ಎಲೆಯನ್ನು ಹುಡುಕಿ ದೂರವಾಣಿಯಲ್ಲಿ ವಿಡಿಯೋ ಕರೆಯ ಮೂಲಕ ಸಮಯವನ್ನು ನಿಗದಿಗೊಳಿಸಿ ನಾಡಿ ಕಟ್ಟಿನಿಂದ ನಿಮ್ಮ ನಾಡಿ ಎಲೆಯಿಂದ ಒಂದಾದ ಮೇಲೆ ಒಂದರಂತೆ ಓದುತ್ತಾ ಮತ್ತು ವಿವರಿಸುತ್ತಾ ಹೋಗುತ್ತೇವೆ ಆಗ ನೀವು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.
ನಾಡಿ ಎಲೆಯು ದೊರೆತ ನಂತರ ನಾಡಿ ಜ್ಯೋತಿಷಿಯು ನೀವು ಆಯ್ಕೆ ಮಾಡಿದ ಅಧ್ಯಾಯಗಳ ಬಗ್ಗೆ ಭವಿಷ್ಯ ವಾಣಿಯನ್ನು ವಿವರಿಸಿ ಒಂದು ಆಡಿಯೋ ಫೈಲ್ (ಧ್ವನಿ ಮುದ್ರಣ) ಅನ್ನು ನಿಮಗೆ ಕಳಿಸುತ್ತಾರೆ.
ಜಗತ್ತಿನಾದ್ಯಂತ ಜನರಿಗೆ ಪೂರ್ಣ ಆನ್ಲೈನ್ ನಾಡಿ ಜ್ಯೋತಿಷ್ಯವನ್ನು ತಿಳಿಸಲು ನಾವು ಹರ್ಷಿಸುತ್ತೇವೆ.
ಡಾ. ಕೆ. ಸೆಲ್ವ ಮುತ್ತು ಕುಮಾರನ್ PhD., DHA
ಅಧಿಕೃತ ನಾಡಿ ಜ್ಯೋತಿಷಿಗಳು,
ಶ್ರೀ ಅತ್ರಿ ಮಹರ್ಷಿ ನಾಡಿ ಜ್ಯೋತಿಷ್ಯ ಕೇಂದ್ರ, ಜಯಂ ಆಯಿಲ್ ಮಿಲ್ ನ ಬಳಿ,
#12/14, ಎ, ತಿರುವದುಧುರೈ ಮಡಥು ಬೀದಿ, ವೈತೀಶ್ವರನ್ ಮಂದಿರ, ಸಿರಕಾಲಿ (ತಾ),
ಮೈಲಾಡುತುರೈ (ಜಿಲ್ಲೆ), ತಮಿಳು ನಾಡು – 609 117, ಭಾರತ.
ಮೊ:+91 9443986041, 7708812431 | ದೂರವಾಣಿ: +91 – 4364 – 276188
ಇ ಮೇಲ್ : [email protected] | [email protected]
www.nadiastrologyonline.com | www.jeevanadi.com
Nadi Jyotishya | Online Nadi Jyotishya
Nadi Jyotishya Bangalore, Nadi Jyotishya Bengaluru, Nadi Jyotishya Kannada, Nadi Jyotishya Karnataka
Dr. K. SELVA MUTHU KUMARAN PhD., DHA,
Authentic Nadi Astrologer,
SRI ATRI MAHARISHI NADI ASTROLOGICAL CENTER,
Near Sri Jayam Oil Mill, # 12/14-A, Thiruvadudhurai Madathu Street, Vaitheeswarankoil, Sirkali (Tk),
Mayiladuthurai (Dist), Tamil Nadu - 609 117, India.
Mobile: +91-9443986041, 7708812431 | Phone: +91-4364-276188
Email: [email protected] | [email protected]
www.nadiastrologyonline.com | www.jeevanadi.com
Nadi Jyotishya is an ancient Indian method of recording data form the Hindu astrology carried out in Vaitheeswaran koil, Vaitheeswaran Temple, Tamil Nadu, India. It is believed that the past, present and the future lives of all human beings were predicted by Great Hindu sages in these Nadi Jyotishya during early periods were written down as Nadi Jyotishya (Palm Leaf Manuscripts/olai chuvadi). The characteristics, family history, and the professions of numerous people are thereby predicted and protected by Nadi Jyotishya. The seekers would come on their own accord in search of the leaves at the destined time.
Nadi Jyotishya is believed that the Seven rishis (7 sages), Agasthiya (Agastya), Kaushik, Atri, Veda Vyasa, Brigu, Vasishtha and Valmiki had forecasted the life of all people and then written on the Palm Leaves (olai chuvadi) by their spiritual powers. (The disciples of the saint who is also called as Trikala Gnani [one who knows all about the three tenses of time line]). Each of the rishis or sages has a Nadi Grantha from which his knowledge is spread out. These Nadi Granthas include Atrinadi, Sivanadi, Agastya nadi, Vasishta nadi, Brighu nadi, Vishwamitra nadi (Kaushika nadi), Nadi Jyothisham etc. Some of these nadis are not complete owing due to the destruction of the leaves as well as loss of some parts during the British rule in India.
Nadi Jyotishya Bangalore, Nadi Jyotishya Bengaluru, Nadi Jyotishya Kannada, Nadi Jyotishya Karnataka
WE DO NOT HAVE BRANCHES IN ANY OTHER PLACES.
Should get prior appointment through email: [email protected] or mobile/WhatsApp number (+917708812431).
Consultation timings morning 9 am to 9 pm.
As an Experienced and renounced Nadi Astrologer we have benefited our clients ,which we can see through the feedback from our clients and makes us to learn that the predictions being expounded through the records of palm leaves we preserve, aptly suits 80% out of 100.
The remedies being prescribed here in the holy script including the temple poojas are left to the sheer choice of the individuals concerned.
Be aware by the misguiding by your Travel Car Drivers and Local Guides. Confirm our Mobile Number (+9177088 12431, +9194439 86041) and full address before your work starts in Vaitheeswaran koil
www.nadiastrologyonline.com | www.jeevanadi.com
ONLINE Nadi Jyotishya PREDICTIONS, JEEVANADI READING THROUGH WHATSAPP / SKYPE DIRECTLY FROM VAITHEESWARANKOIL MAIN CENTRE TAMILNADU INDIA
In absence of a person how to get his/her predictions through Nadi Jyotishya and Jeevanadi, We have exclusively prepared a special way of service for those who are unable to be in person at our Sri Atri Nadi Astro Centre. You are required to send your thumb impression (Right thumb Impression for Male, Left Thumb Impression for Female) through email: [email protected] or by WhatsApp: (+91)7708812431 along with your basic Birth details.
You can call us for any queries if you need help on sending your thumb impression. Only with the help of those details given by you, we will search your concerned leaf. A session will be booked on phone call, video call as per your convenience to search your perfect Nadi leaf in the Nadi bundles. We will read and explain all leaves one by one to you and you have to answer for all the questions.
Once your Nadi leaf has been found then Nadi astrologer will explain your future predictions about the chapters which you select and finally a recorded Audio file will be sent to you.
We will be delighted to provide the complete Nadi Jyotishya online reading service, for people throughout the world.
Welcome to Nadi Jyotishya Online
We provide Nadi Online reading services from Vaitheeswaran Koil through our website for your convenience from India. We provide Nadi Online services in major languages such as English, Hindi, Tamil, Telugu & Malayalam across the world especially the customers from USA (United States of America), England, UK (United Kingdom), Australia, Germany, France, New Zealand, Canada, UAE, Dubai, Sharjah, Qatar, Abu Dhabi, Malaysia, Singapore, Japan, Sri Lanka, Holland, Belgium, Europe & many more countries. Nadi Jyotishya Bangalore, Nadi Jyotishya Bengaluru, Nadi Jyotishya Kannada, Nadi Jyotishya Karnataka.
Looking to change your life in a better way?